Govinda Sunita Ahuja: ನಟ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಅವರೊಂದಿಗೆ 37ವರ್ಷಗಳ ದಾಂಪತ್ಯ ಜೀವನವನ್ನು ಕೊನೆಗೊಳಿಸಲಿದ್ದು ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತೆ ಬೆಂಕಿಯಂತೆ ಹಬ್ಬಿದೆ. ಈ ಮಧ್ಯೆ ಸುನೀತಾ ಅಹುಜಾ ಅವರ ಸಂದರ್ಶನದ ವಿಡಿಯೋ ಸಹ ವೈರಲ್ ಆಗಿದ್ದು ಇದರಲ್ಲಿ ಅವರು ಗೋವಿಂದ ಹಾಗೂ ತಾವು ಬೇರೆ ಬೇರೆ ಮನೆಗಳಲ್ಲಿ ವಾಸಿಸುತ್ತಿರುವುದೇಕೆ ಎಂಬ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.
ಕೆಲ ದಿನಗಳ ಹಿಂದಿನ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಸುನೀತಾ, ತಾನು ತನ್ನ ಮಕ್ಕಳಾದ ಟೀನಾ ಹಾಗೂ ಯಶ್ ಜೊತೆಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದು, ಗೋವಿಂದ ಅಪಾರ್ಟ್ಮೆಂಟ್ ಎದುರೇ ಇರುವ ಬಂಗಲೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ- ವಿಚ್ಛೇದನಕ್ಕಾಗಿ ನಟಿ ಸಮಂತಾ ನಾಗ ಚೈತನ್ಯರಿಂದ ಪಡೆದ ಜೀವನಾಂಶ ಎಷ್ಟು ಗೊತ್ತಾ...?
ಇನ್ನೂ ಗೋವಿಂದ ಹಾಗೂ ತಾವು ಪ್ರತ್ಯೇಕವಾಗಿರುವ ಹಿಂದಿನ ಕಾರಣವನ್ನೂ ಬಿಚ್ಚಿಟ್ಟಿದ್ದ ಸುನೀತಾ ಅಹುಜಾ, ನಮಗೆ ಎರಡು ಮನೆಗಳಿವೆ. ನಮ್ಮ ಅಪಾರ್ಟ್‌ಮೆಂಟ್‌ನ ಮುಂದೆಯೇ ನಮ್ಮ ಬಂಗಲೆಯೂ ಇದೆ. ನಾನು ದೇವರು, ಪೂಜೆ ಸಂಪ್ರದಾಯದಲ್ಲಿ ಬಹಳ ವಿಶ್ವಾಸ ಹೊಂದಿದ್ದೇನೆ. ಹಾಗಾಗಿ ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪ್ರತ್ಯೇಕವಾದ ಪೂಜಾ ಮಂದಿರವನ್ನು ನಿರ್ಮಿಸಿದ್ದೇವೆ. ಹಾಗಾಗಿ ಮಕ್ಕಳೊಂದಿಗೆ ನಾನು ಹೆಚ್ಚಾಗಿ ಅಪಾರ್ಟ್‌ಮೆಂಟ್‌ನಲ್ಲಿಯೇ ಇರಲು ಇಚ್ಚಿಸುತ್ತೇನೆ ಎಂದಿದ್ದರು.
ಇದೇ ಸಂದರ್ಭದಲ್ಲಿ ತಮ್ಮ ಬಂಗಲೆಯಲ್ಲೇ ಗೋವಿಂದ ಅವರ ಸಿನಿಮಾ, ವ್ಯವಹಾರ ಸಂಬಂಧಿತ ಸಭೆಗಳು ನಡೆಯುತ್ತಿರುತ್ತವೆ. ಕೆಲವೊಮ್ಮೆ ತಡರಾತ್ರಿಯವರೆಗೂ ಮೀಟಿಂಗ್ ಗಳು ನಡೆಯುತ್ತಾಳೆ ಇರುತ್ತವೆ. ಗೋವಿಂದ ಅವರಿಗೆ ಜರ ಮಧ್ಯೆ ಕುಳಿತು ಹರಟೆ ಹೊಡೆಯುವುದು ಇಷ್ಟ. ಆದರೆ, ನಾನು ಹೆಚ್ಚು ಮಾತನಾಡುವುದರಿಂದ ಶಕ್ತಿ ವ್ಯರ್ಥವಾಗುತ್ತದೆ ಎಂದು ಭಾವಿಸುತ್ತೇನೆ. ಇದಲ್ಲದೆ, ನನಗೆ ರಾತ್ರಿ 09:30ರೊಳಗೆ ಮಲಗುವ ಅಭ್ಯಾಸವಿರುವುದರಿಂದ ಮಕ್ಕಳೊಂದಿಗೆ ಅಪಾರ್ಟ್‌ಮೆಂಟ್‌ನಲ್ಲಿ ಇರುತ್ತೇನೆ. ತಮ್ಮ ಕೆಲಸಗಳನ್ನೆಲ್ಲ ಮುಗಿಸಿ ಗೋವಿಂದ ಸಹ ಇಲ್ಲೇ ಬರುತ್ತಾರೆ. ನಮ್ಮ ಸಂಬಂಧದ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ಹೇಳಿದ್ದರು.
ಇದನ್ನೂ ಓದಿ- Govinda Divorce: "ನಾನು ಆ ಪ್ರಕ್ರಿಯೆಯಲ್ಲಿದ್ದೇನೆ..." ವಿಚ್ಛೇದನ ವದಂತಿಗಳ ಬಗ್ಗೆ ಮೌನ ಮುರಿದ ಗೋವಿಂದ...
ಗೋವಿಂದ ಸುನೀತಾ ಡಿವೋರ್ಸ್ ಸತ್ಯವೇ?
ಇದೀಗ ಗೋವಿಂದ ಮತ್ತು ಸುನೀತಾ ಅಹುಜಾ ವಿಚ್ಛೇದನ ವದಂತಿ ಸಖತ್ ವೈರಲ್ ಆಗುತ್ತಿದೆ. ಆದರೂ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ. ಗೋವಿಂದ ಅವರ ಆಪ್ತ ಮೂಲಗಳ ಪ್ರಕಾರ, ಗೋವಿಂದ ಸುನೀತಾ ಅಹುಜಾ ಅವರ ದಾಂಪತ್ಯದಲ್ಲಿ ಸಣ್ಣಪುಟ್ಟ ಮನಸ್ತಾಪವಿರಬಹುದು. ಆದರೆ, ಇದು ಶೀಘ್ರದಲ್ಲೇ ಸರಿಹೋಗುವ ನಿರೀಕ್ಷೆಯಿದೆ ಎಂದು ತಿಳಿದುಬಂದಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.