ದಿನಭವಿಷ್ಯ 26-02-2025: ಮಹಾಶಿವರಾತ್ರಿಯಂದು ಪರಿಘ ಯೋಗ, ಈ ರಾಶಿಯವರಿಗೆ ಭೋಲೆನಾಥನ ಅನುಗ್ರಹ

Today Horoscope 26th February 2025:  ಬುಧವಾರದ ದಿನ ಮಹಾಶಿವಾರಾತ್ರಿ ಶ್ರವಣ ನಕ್ಷತ್ರ ಪರಿಘ ಯೋಗ ವಿಷ್ಟಿ ಕರಣ. ಇಂದು  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Feb 26, 2025, 08:13 AM IST
  • ಉತ್ತರಾಯಣ, ಸೌರ ವಸಂತ ಋತು, ಮಾಘ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ
  • ಬುಧವಾರದ ದಿನ ಮಹಾಶಿವಾರಾತ್ರಿ ಶ್ರವಣ ನಕ್ಷತ್ರ ಪರಿಘ ಯೋಗ ವಿಷ್ಟಿ ಕರಣ.
  • ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರಿಗೆ ಏನು ಫಲ ತಿಳಿಯಿರಿ.
ದಿನಭವಿಷ್ಯ 26-02-2025:  ಮಹಾಶಿವರಾತ್ರಿಯಂದು ಪರಿಘ ಯೋಗ, ಈ ರಾಶಿಯವರಿಗೆ ಭೋಲೆನಾಥನ ಅನುಗ್ರಹ  title=

Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಮಾಘ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಬುಧವಾರದ ದಿನ ಮಹಾಶಿವಾರಾತ್ರಿ ಶ್ರವಣ ನಕ್ಷತ್ರ ಪರಿಘ ಯೋಗ ವಿಷ್ಟಿ ಕರಣ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರಿಗೆ ಏನು ಫಲ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ವ್ಯಾಪಾರ-ವ್ಯವಹಾರದಲ್ಲಿ ಆಕರ್ಷಕ ಪ್ರಸ್ತಾಪಗಳನ್ನು ಪಡೆಯಬಹುದು. ವೃತ್ತಿ ಜೀವನದಲ್ಲಿ ಸಿಗುವ ಹೊಸ ಹೊಸ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಹೊಸ ಯೋಜನೆಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ದೀರ್ಘಾವಧಿಯ ಯೋಜನೆಗಳು ವೇಗವನ್ನು ಪಡೆಯಲಿವೆ. ಆತ್ಮವಿಶ್ವಾಸದಿಂದ ಮಾಡಿದ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗಲಿದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಹಣಕಾಸಿನ ವಿಷಯಗಳು ಸ್ಥಿರವಾಗಿರುತ್ತದೆ. ಅನಿರೀಕ್ಷಿತ ಸಂದರ್ಭಗಳನ್ನು ಜಾಣ್ಮೆಯಿಂದ ನಿರ್ವಹಿಸಿ. ಕುಟುಂಬ ಸದಸ್ಯರ ಮಾತಿಗೆ ಕಿವಿಗೊಡಿ, ಅವರ ಸಲಹೆಗಳನ್ನು ಪಾಲಿಸುವುದರಿಂದ ಯಶಸ್ಸು ಸಿಗಲಿದೆ. ಅಗತ್ಯ ಕೆಲಸಗಳಲ್ಲಿ ತಾಳ್ಮೆ ಇರಲಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಪಾಲುದಾರಿಕೆಗಾಗಿ ಪ್ರಯತ್ನಗಳನ್ನು ಹೆಚ್ಚಿಸುವ ಅಗತ್ಯವಿದೆ. ವೈಯಕ್ತಿಕ ವಿಚಾರಗಳಲ್ಲಿ ಗಂಭೀರತೆ ಮುಖ್ಯ. ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವಾಗ ಸಣ್ಣಪುಟ್ಟ ಸಮಸ್ಯೆಗಳು ಸಾಮಾನ್ಯ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. 

ಇದನ್ನೂ ಓದಿ- 100 ವರ್ಷಗಳ ಬಳಿಕ ಮಹಾ ಶಿವರಾತ್ರಿಯ ದಿನವೇ ಶನಿಯಿಂದ ಶಶ, ಮಾಲವ್ಯ ಯೋಗ: ಈ ರಾಶಿಯವರಿಗೆ ಅದೃಷ್ಟ, ರಾಜವೈಭೋಗ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆ ಮನೋಭಾವದ ಮೂಲಕ ಹಣಕಾಸಿನ ವಿಷಯಗಳಲ್ಲಿ ಉತ್ತಮ ಫಲಿತಾಂಶವನ್ನು ಪಡೆಯುವಿರಿ. ವ್ಯವಹಾರದಲ್ಲಿ ಆಲಸ್ಯವನ್ನು ತಪ್ಪಿಸಿ, ಇಲ್ಲವೇ ಭಾರೀ ನಷ್ಟ ಉಂಟಾಗಬಹುದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಪ್ರಮುಖ ಕೆಲಸಗಳಲ್ಲಿ ಆಪ್ತರಿಂದ ಬೆಂಬಲ ದೊರೆಯಲಿದೆ. ನಿಮ್ಮ ಕೆಲಸದಲ್ಲಿ ಉತ್ಸಾಹವನ್ನೂ ಕಾಪಾಡಿಕೊಳ್ಳಿ. ಶಿಕ್ಷಣ ಮತ್ತು ತರಬೇತಿಯಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವೈಯಕ್ತಿಯ ಪ್ರಗತಿಗಾಗಿ ಅಗತ್ಯ ಬದಲಾವಣೆಗಳನ್ನು ಮಾಡಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮ್ಮ ವೈಯಕ್ತಿಕ ವಿಷಯಗಳತ್ತ ಗಮನ ಹರಿಸಿ. ಕುಟುಂಬದಲ್ಲಿ ಸಾಮರಸ್ಯವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಆಸ್ತಿ ಅಥವಾ ವಾಹನ ಖರೀದಿ ಯೋಗವಿದೆ. ಪೂರ್ವಜರ ಆಸ್ತಿಯಿಂದ ಲಾಭ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಹೊಸ ವ್ಯವಹಾರ ಆರಂಭಿಸುವ ಅಥವಾ ವ್ಯವಹಾರವನ್ನು ವಿಸ್ತರಿಸುವ ಪ್ರಯತ್ನಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಕಾಣುವಿರಿ. ಇದಕ್ಕಾಗಿ ನಿಮ್ಮ ಸಂಗಾತಿ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಸಂವಹನ ಮತ್ತು ಸಂಭಾಷಣೆ ಉತ್ತಮವಾಗಿರುತ್ತದೆ.

ಇದನ್ನೂ ಓದಿ- ಮಹಾಶಿವರಾತ್ರಿಯ ದಿನ ರಾಶಿಗನುಗುಣವಾಗಿ ಶಿವ ಮಂದಿರಕ್ಕೆ ಭೇಟಿ ನೀಡಿದರೆ ಜೀವನದಲ್ಲಿ ಅದೃಷ್ಟ, ಸಿರಿವಂತಿಕೆ 

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಪ್ರೀತಿಪಾತ್ರರ ಬೆಂಬಲ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಪೂರ್ವಿಕರ ಆಸ್ತಿ ವಿವಾದಗಳು ಬಗೆಹರಿಯಲಿವೆ. ಸಂಪತ್ತು ಹೆಚ್ಚಾಗುತ್ತದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಚರ್ಚೆಗಳು ಮತ್ತು ಸಂವಹನಗಳಲ್ಲಿ ಆಧುನಿಕತೆಗೆ ಒತ್ತು ನೀಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ಆಪ್ತರು ಮತ್ತು ಕುಟುಂಬಸ್ಥರ ಮಾತು ಕೇಳಿ, ಪರಸ್ಪರ ಬೆಂಬಲ ಹೊರಗಿನವರೆದುರು ಮೇಲುಗೈ ಸಾಧಿಸುತ್ತದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಹೂಡಿಕೆ ಸಂಬಂಧಿತ ವಿಚಯಗಳ್ಳಿ ಆಸಕ್ತಿ ಹೆಚ್ಚಾಗುತ್ತದೆ. ಹೊರಗಡೆ ಹೋದಾಗ ನಿಮ್ಮ ಬಜೆಟ್ ಗೆ ಹೆಚ್ಚಿನ ಗಮನ ನೀಡಿ. ಇಲ್ಲವೇ ಸಾಲದ ಸುಳಿಯಲ್ಲಿ ಸಿಲುಕುವ ಸಂಭವವಿದೆ. ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಡಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಪ್ರಮುಖ ಕೆಲಸಗಳಲ್ಲಿ ನಿರೀಕ್ಷೆಯಂತೆ ಪ್ರಗತಿ ಕಾಣುವಿರಿ. ವಿವಿಧ ಯೋಜನೆಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿದೆ. ಪ್ರೇಮ ಸಂಬಂಧಗಳು ಬಲಗೊಳ್ಳುತ್ತವೆ. ವೃತ್ತಿಪರ ಸಕಾರಾತ್ಮಕತೆ ಹೆಚ್ಚಾಗುತ್ತದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News