Aamir Khan: ಬಾಲಿವುಡ್ ನಟ ಖ್ಯಾತ ನಟನ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಭಿಕ್ಷುಕನ ರೂಪದಲ್ಲಿ ಈ ನಟ ಬೀದಿಗಳಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ರಸ್ತೆಯಲ್ಲಿ ನಡೆದಾಡುವ ಜನರು ಈ ನಟ ಯಾರೆಂದು ಗುರುತಿಸಲು ಸಹ ಸಾಧ್ಯವಾಗಲಿಲ್ಲ. ಆದರೆ ಆ ನಂತರ ಸೋಷಿಯಲ್ ಮೀಡಿಯಾದಲ್ಲು ಈ ವಿಡಿಯೋ ನೋಡಿದ ಜನರು ಶಾಕ್ ಆಗಿದ್ದಾರೆ. ಈ ವಿಡಿಯೋ ನೋಡಿದ ನಂತರ ಭಿಕ್ಷುಕನ ವೇಷದಲ್ಲಿ ತಿರುಗಾಡುತ್ತಿರುವ ವ್ಯಕ್ತಿ ಯಾರೆಂದು ತಿಳಿದಿದೆ.
ಮುಂಬೈನ ಬೀದಿಗಳಲ್ಲಿ ಭಿಕ್ಷುಕನಂತೆ ಓಡಾಡಿದ ವ್ಯಕ್ತಿ ಬಾಲಿವುಡ್ ಸೂಪರ್ ಸ್ಟಾರ್ ಅಮಿರ್ ಖಾನ್. ಹೌದು, ಅಮಿರ್ ಖಾನ್ ಮುಂಬೈನ ಬೀದಿಗಳಲ್ಲಿ ಭಿಕ್ಷುಕನಂತೆ ಲುಕ್ ಹಾಕಿಕೊಂಡು ಓಡಾಡಿದ್ದಾರೆ. ಆ ಬಳಿಕ ಅಮೀರ್ ಖಾನ್ ಈ ತಮಾಷೆಯ ಬಗ್ಗೆ ಬಹಿರಂಗಪಡಿಸಿದರು. ಅಮೀರ್ ಖಾನ್ ಈ ಹಿಂದೆಯೂ ಇಂತಹ ತಮಾಷೆಯ ಕೆಲಸಗಳನ್ನು ಮಾಡಿದ್ದಾರೆ.
To Ye Caveman Amir Khan Tha BC 😲😲
But Why ? pic.twitter.com/fRgDB6cEhr
— POSITIVE FAN (@imashishsrrk) January 29, 2025
ಮುಂಬೈನ ಐಷಾರಾಮಿ ಬಂಗಲೆಯಲ್ಲಿ ವಾಸಿಸುವ ಆಮಿರ್ ಖಾನ್ ಬಾಲಿವುಡ್‌ನ ಅತಿದೊಡ್ಡ ತಾರೆಗಳಲ್ಲಿ ಒಬ್ಬರು. ಅವರ ಒಟ್ಟು ಸಂಪತ್ತು ಸುಮಾರು 1900 ಕೋಟಿ ರೂ. ಎಂದು ಹೇಳಲಾಗುತ್ತದೆ. ಅವರು 3 ದಶಕಗಳಿಗೂ ಹೆಚ್ಚು ಕಾಲ ಬಾಲಿವುಡ್‌ನಲ್ಲಿ ಸಕ್ರಿಯರಾಗಿದ್ದಾರೆ. ಅವರ ಚಲನಚಿತ್ರಗಳು ಯಾವಾಗಲೂ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿ ಆಗಿವೆ.
ಇದನ್ನೂ ಓದಿ: ಚಂದನ್ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್ ಪಡೆದಿರುವುದು ಆ ಒಂದು ಕಾರಣಕ್ಕೆ: ಅನುಪಮಾ ಗೌಡ
ಇತ್ತೀಚೆಗೆ ಆಮಿರ್ ಖಾನ್ ಅವರ ಮಗ ಜುನೈದ್ ಖಾನ್ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಜುನೈದ್ ಅವರ "ಲವ್‌ಯಾಪ" ಚಿತ್ರ ಫೆಬ್ರವರಿ 7 ರಂದು ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಅದರ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಅಮೀರ್ ಖಾನ್ ಅವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಚರ್ಚಿಸಲ್ಪಡುತ್ತಿದೆ. ಅವರ ಅಭಿಮಾನಿಗಳು ಸಹ ಇದಕ್ಕೆ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಕಳೆದ ಗುರುವಾರ, ಹರಿದ ಬಟ್ಟೆ ಧರಿಸಿ ಮುಂಬೈನ ಜನನಿಬಿಡ ಬೀದಿಗಳಲ್ಲಿ ಒಬ್ಬ ವ್ಯಕ್ತಿ ಓಡಾಡಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಅದು ವಿಚಿತ್ರ ಮತ್ತು ಗೊಂದಲಮಯವಾಗಿತ್ತು. ಮೊದಲಿಗೆ, ನೋಡುಗರು ದಪ್ಪ ಗಡ್ಡ ಮತ್ತು ಕೆದರಿದ ಕೂದಲನ್ನು ಹೊಂದಿದ್ದ ವಿಚಿತ್ರ ಮನುಷ್ಯನನ್ನು ಗುರುತಿಸಲು ವಿಫಲರಾದರು. ತೆರೆಮರೆಯ ಫೋಟೋ ಹೊರಬಿದ್ದಾಗ ಜನರು ಈ ವೇಷ ಧರಿಸಿದ ವ್ಯಕ್ತಿಯನ್ನು ಬಾಲಿವುಡ್ ನಟ ಅಮೀರ್ ಖಾನ್ ಎಂದು ತಿಳಿದುಕೊಂಡರು.
Aamir Khan’s Caveman Transformation Video Takes the Internet by Storm .#AamirKhan #Caveman #Mumbai #bollywood #ViralVideo pic.twitter.com/NBZsxsBHWA
— Circle Of Bollywood (@CircleBollywood) January 30, 2025
ಆಮಿರ್ ಅವರ ವಿಚಿತ್ರ ಮೇಕ್ ಓವರ್ ಬಗ್ಗೆ ಅನೇಕ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 'ದಂಗಲ್', 'ಘಜಿನಿ' ಮತ್ತು 'ಲಾಲ್ ಸಿಂಗ್ ಚಡ್ಡಾ' ಚಿತ್ರಗಳಲ್ಲಿನ ಪಾತ್ರಗಳಿಗಾಗಿ ಅಮಿರ್ ಖಾನ್ ತಮ್ಮ ದೇಹವನ್ನು ವಿಚಿತ್ರವಾಗಿ ಪರಿವರ್ತಿಸಿಕೊಂಡಿದ್ದಾರೆ. ಅಮಿರ್ ಅವರ ಮುಂದಿನ ಚಿತ್ರ 'ಸೀತಾರೆ ಜಮೀನ್ ಪರ್' ಆಗಿದೆ. ಇದು 2007 ರ ಚಿತ್ರ 'ತಾರೆ ಜಮೀನ್ ಪರ್' ನ ಮುಂದುವರಿದ ಭಾಗವಾಗಿದ್ದು, ಈ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಜೆನಿಲಿಯಾ ದೇಶಮುಖ್ ಮತ್ತು ದರ್ಶೀಲ್ ಸಫಾರಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: ಜ.31 ರಂದು ಬಿಡುಗಡೆಯಾಗಲಿರುವ `ನೋಡಿದವರು ಏನಂತಾರೆ' ಚಿತ್ರಕ್ಕೆ ನವೀನ್ ಶಂಕರ್ ತಯಾರಿ ಹೇಗಿತ್ತು? ನೋಡಿ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.