ತೆಲುಗಿನಲ್ಲಿ ಕನ್ನಡದ ನಟಿಯರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು… ನಾಯಕಿ ಪಾತ್ರಕ್ಕೂ ಕನ್ನಡತಿಯರೇ, ಐಟಂ ಸಾಂಗಿಗೂ ಕನ್ನಡತಿಯರೇ…

Kannada Actress: ಕನ್ನಡ ಸಿನಿ ಅಭಿಮಾನಿಗಳಿಗೆ ಇದೊಂದು ರೀತಿಯ ಖುಷಿಯ ವಿಷಯವೂ ಹೌದು, ದುಃಖದ ವಿಷಯವೂ ಹೌದು. ಸಂತೋಷದ ವಿಷಯ ಏನೆಂದರೆ ನಮ್ಮ ಹುಡುಗಿಯರು ತೆಲುಗನ್ನು ಅವರಿಸಿಕೊಳ್ಳುತ್ತಿದ್ದಾರೆ ಅಂತಾ.

Written by - Yashaswini V | Last Updated : Nov 29, 2024, 01:19 PM IST
  • ತೆಲುಗು ಚಿತ್ರರಂಗದಲ್ಲಿ ಈಗ ಕನ್ನಡತಿಯರಾದ ರಶ್ಮಿಕಾ ಮಂದಣ್ಣ, ಶ್ರೀಲೀಲಾ ಮತ್ತು ಆಶಿಕಾ ರಂಗನಾಥ್ ಅವರದೇ ಹವಾ.
  • ನಭಾ ನಟೇಶ್, ಸಂಯುಕ್ತಾ ಹೆಡ್ಗೆ, ಕಾವ್ಯ ಶೆಟ್ಟಿ ಅವರಿಗೂ ತೆಲುಗು ಸಿನಿಮಾ ರಂಗದಲ್ಲಿ ಅವಕಾಶಗಳು ಬರುತ್ತಿವೆ.
  • ಕನ್ನಡದ ನಟಿಯರಿಗೆ ಹೆಚ್ಚೆಚ್ಚು ಸಂಭಾವನೆ ಸಿಗುತ್ತಿದೆ ಎನ್ನುವ ವರ್ತಮಾನ ಇದೆ.
ತೆಲುಗಿನಲ್ಲಿ ಕನ್ನಡದ ನಟಿಯರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು… ನಾಯಕಿ ಪಾತ್ರಕ್ಕೂ ಕನ್ನಡತಿಯರೇ, ಐಟಂ ಸಾಂಗಿಗೂ ಕನ್ನಡತಿಯರೇ… title=

Kannada Actress In Telugu Cinema: ತೆಲುಗು ಚಿತ್ರರಂಗದಲ್ಲಿ ಕನ್ನಡದ ನಟಿಯರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡು ಬಂದಿದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್ ಮತ್ತಿತರರು ತೆಲುಗು ಚಿತ್ರರಂಗದ ನಾಯಕಿ ಪಾತ್ರವನ್ನು ಅವರಿಸಿಕೊಂಡುಬಿಟ್ಟಿದ್ದಾರೆ. ಹೆಚ್ಚು ಸಿನಿಮಾಗಳು ಕನ್ನಡತಿಯರ ಕೈಯಲ್ಲೇ ಇವೆ. ತೆಲುಗಿನಲ್ಲಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟಿಯರು ಕನ್ನಡಿಗರೇ ಆಗಿದ್ದಾರೆ. ಹಾಗೆಯೇ ನಾಯಕಿ ಪಾತ್ರಕ್ಕೂ ಕನ್ನಡತಿಯರೇ, ಐಟಂ ಸಾಂಗಿಗೂ ಕನ್ನಡತಿಯರೇ ಎನ್ನುವಂತಾಗಿದೆ. 

ಕನ್ನಡ ಸಿನಿ ಅಭಿಮಾನಿಗಳಿಗೆ ಇದೊಂದು ರೀತಿಯ ಖುಷಿಯ ವಿಷಯವೂ ಹೌದು, ದುಃಖದ ವಿಷಯವೂ ಹೌದು. ಸಂತೋಷದ ವಿಷಯ ಏನೆಂದರೆ ನಮ್ಮ ಹುಡುಗಿಯರು ತೆಲುಗನ್ನು ಅವರಿಸಿಕೊಳ್ಳುತ್ತಿದ್ದಾರೆ ಅಂತಾ. ನೋವಿನ ವಿಷಯ ಎಂದರೆ ನಮ್ಮ ಹುಡುಗಿಯರು ಬೇರೆ ಭಾಷೆಗೆ ಹೊರಟೋಗಿದ್ದಾಗಿದ್ದಾರೆ ಎನ್ನುವುದು. ಇರಲಿ, ಕನ್ನಡ ಸಿನಿಮಾ ರಂಗಕ್ಕೆ ಅವರನ್ನು ಉಳಿಸಿಕೊಳ್ಳುವ ಕಲೆ ಗೊತ್ತಿದೆಯೋ ಗೊತ್ತಿಲ್ಲವೋ ದೊಡ್ಡ ಮಟ್ಟದಲ್ಲಿ ಕನ್ನಡದ ನಟಿಯರು ತೆಲುಗಿಗೆ ಹೋಗುತ್ತಿದ್ದಾರೆ ಮತ್ತು ಅಲ್ಲೇ ಸೆಟಲ್ ಆಗುತ್ತಿದ್ದಾರೆ. 

ಕನ್ನಡದಿಂದ ತೆಲುಗಿಗೆ ಹೋಗುವ ಟ್ರೆಂಡ್ ಶುರುವಾಗಿದ್ದು ಹಿರಿಯ ನಟಿ ಸರೋಜಾ ದೇವಿ ಮತ್ತು ಜಯಂತಿ ಅವರ ಕಾಲದಲ್ಲಿ. ನಂತರ  ರಕ್ಷಿತಾ, ಪ್ರಣೀತಾ, ಹರಿಪ್ರಿಯಾ, ರಚಿತಾ ರಾಮ್ ಹೋಗಿದ್ದರು. ಇದೀಗ ದೊಡ್ಡ ದಂಡೇ ತೆಲುಗು ಚಿತ್ರರಂಗವನ್ನು ಆಕ್ರಮಿಸಿಕೊಂಡಿದ್ದಾರೆ. ಆ ಪೈಕಿ ಮಿರಿ ಮಿರಿ ಮಿಂಚುತ್ತಿರುವವರಲ್ಲಿ ನಂಬರ್ ಒನ್ ಸ್ಥಾನ ರಶ್ಮಿಕಾ ಮಂದಣ್ಣ ಅವರದು. 

ಇದನ್ನೂ ಓದಿ- Pushpa 2: ಸಕತ್ ಸದ್ದು ಮಾಡ್ತಿರೋ ಶ್ರೀಲೀಲಾರ ಐಟಂ ಸಾಂಗ್ ‘ಕಿಸಕ್’ ಬಗ್ಗೆ ‘ಊ ಅಂಟಾವಾ’ ಹಾಡಿಗೆ ಸೊಂಟ ಬಳುಕಿಸಿದ್ದ ಸಮಂತಾ ಏನೇಳಿದ್ದಾರೆ ಗೊತ್ತಾ?

‘ಚಲೋ’ ಚಿತ್ರದ ಮೂಲಕ ತೆಲುಗು ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಮತ್ತೆ ಹಿಂತಿರುಗಿ ನೋಡಿಲ್ಲ. ನಂತರ ವಿಜಯ್ ದೇವರಕೊಂಡ ಜೊತೆ ಮಾಡಿದ ‘ಗೀತಾ ಗೋವಿಂದಂ’ ಸಿಕ್ಕಾಪಟ್ಟೆ ಸದ್ದು ಮಾಡಿತು. ಆಗಲೇ ವಿಜಯಕೊಂಡ ಮತ್ತು ರಶ್ಮಿಕಾ ಮಂದಣ್ಣ ಲವ್ವಲ್ಲಿ ಬಿದ್ದಿದ್ದಾರೆ ಎನ್ನುವ ಗಾಸಿಪ್ ಕೂಡ ಹುಟ್ಟಿಕೊಂಡಿತು. ಇದಕ್ಕೆ ಪೂರಕ ಎನ್ನುವಂತೆ ಮತ್ತೆ ವಿಜಯ್ ದೇವರಕೊಂಡ ಜೊತೆ ‘ಡಿಯರ್ ಕಾಮ್ರೇಡ್’ ಚಿತ್ರ ಮಾಡಿದರು. ನಂತರ ಮಹೇಶ್ ಬಾಬುಗೆ ನಾಯಕಿಯಾಗಿ ‘ಸರಿಲೇರು, ನಿಕೇವ್ವರು’ ಸಿನಿಮಾ ಮಾಡಿದರು. ಆಮೇಲೆ ನಿತಿನ್ ಜೊತೆ ‘ಭೀಷ್ಮ’ ಚಿತ್ರ ಮಾಡಿದರು. ನಂತರ ಬಂದಿದ್ದೆ ಸೂಪರ್ ಡೂಪರ್ ಹಿಟ್ ಚಿತ್ರ ‘ಪುಷ್ಪಾ’. ಕನ್ನಡ, ಹಿಂದಿ, ತಮಿಳು, ಮಳೆಯಾಳಂಗೆ ಡಬ್ ಆದ ‘ಪುಷ್ಪಾ’ ಸಿನಿಮಾ ರಶ್ಮಿಕಾ ಮಂದಣ್ಣ ಅವರನ್ನು ಇನ್ನೊಂದು ಲೆವಲ್ ಗೆ ಕೊಂಡೊಯ್ಯಿತು. 

ಸದ್ಯ ಡಿಸಂಬರ್ 5ಕ್ಕೆ ‘ಪುಷ್ಪಾ-2’ ಬಿಡುಗಡೆ ಆಗುತ್ತಿದೆ. ಇದಾದ ಮೇಲು ರಶ್ಮಿಕಾ ಮಂದಣ್ಣ  ಸಾಲು ಸಾಲು ಸಿನಿಮಾಗಳಿವೆ. ಜೊತೆಗೆ ಈಗ ಬಾಲಿವುಡ್ ನಲ್ಲೂ ರಶ್ಮಿಕಾಗೆ ಬೇಡಿಕೆ ಬಂದಿದ್ದು, ಎಪಿಕ್ ಹಿಸ್ಟಾರಿಕಲ್ ಸಿನಿಮಾ ‘ಛಾವಾ’ದಲ್ಲಿ ರಶ್ಮಿಕಾ ರಾಣಿ ಯೇಸುಬಾಯಿ ಆಗಿ ಮಿಂಚಿದ್ದಾರೆ. ಇದಲ್ಲದೆಯೂ ಇನ್ನೂ ಹಲವು ಸಿನಿಮಾಗಳು ರಶ್ಮಿಕಾ ಖಾತೆಯಲ್ಲಿವೆ. ತೆಲುಗಿನಲ್ಲಿ ಶರ್ವಾನಂದ್ ಜೊತೆ ‘ಆಡಾಲ್ಲೋ ಮೀಕು ಜೋಹಾರ್ಲು’ ಸಿನಿಮಾ ಬರುತ್ತಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್ ಜೊತೆ ‘ಸಿಕಂದರ್’ ಸಿದ್ಧವಾಗುತ್ತಿದೆ. ಧನುಷ್ ಜೊತೆ ‘ಕುಬೇರನ್’ ಚಿತ್ರೀಕರಣ ಆಗಬೇಕಿದೆ. ಅಯುಷ್ಮಾನ ಖುರಾನಾ ಜೊತೆ ‘ತಮಾ’ ಸಿನಿಮಾ ಮಾಡುತ್ತಾರೆ. ‘ದಿ ಗರ್ಲ್ ಫ್ರೆಂಡ್’ ಮತ್ತು ‘ರೈನ್ ಬೋ’ ಮತ್ತು ‘ದಿ ಕೇರಳ’ ಸಿನಿಮಾಗಳಿವೆ.

ರಶ್ಮಿಕಾ ಮಂದಣ್ಣ ನಂತರ ತೆಲುಗಿನಲ್ಲಿ ಈಗ ಸಿಕ್ಕಾಪಟ್ಟೆ ಬೇಡಿಕೆ ಇರುವುದು ಶ್ರೀಲೀಲಾ ಅವರಿಗೆ. ‘ಕಿಸ್’, ‘ಭರಾಟೆ’ ಮತ್ತು ‘ಬೈ ಟು ಲವ್’ ಎಂಬ ಕನ್ನಡ ಸಿನಿಮಾಗಳನ್ನು ಮಾಡಿರುವ ಶ್ರೀಲೀಲಾ ಈಗ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬ್ಯುಸಿ. 2022ರಲ್ಲಿ  ‘ಪೆಲ್ಲಿ ಸಂದದ್’ ಚಿತ್ರದ ಮೂಲಕ ತೆಲುಗಿಗೆ ಕಾಲಿಟ್ಟ ಶ್ರೀಲೀಲಾ ಅಂದಿನಿಂದಲೂ ತಮ್ಮ ಬೇಡಿಕೆಯನ್ನು ಉಳಿಸಿಕೊಂಡಿದ್ದಾರೆ. ‘ಧಮಾಕಾ’, ‘ಬಿಗ್ ಧಮಾಕಾ’, ‘ಐ ಲವ್ ಯು ಈಡಿಯಟ್’, ‘ಎಕ್ಸ್ಟ್ರಾರ್ಡಿನರಿ ಮ್ಯಾನ್’, ‘ಆದಿ ಕೇಶವ’, ‘ಭಗವಂತ್ ಕೇಸರಿ’ ಎನ್ನುವ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ತೆಲುಗಿನಲ್ಲಿ ಅಭಿನಯಿಸಿದ ‘ಸ್ಕಂದ’ ಸಿನಿಮಾ ಕನ್ನಡ, ಹಿಂದಿ, ತಮಿಳು ಮತ್ತು ಮಲೆಯಾಳಂಗೆ ಡಬ್ ಆಗಿದೆ. ಈ ವರ್ಷ ತೆರೆಕಂಡ ‘ಗುಂಟೂರ್ ಕಾರಮ್’ ಕೂಡ ಸಕತ್ ಸದ್ದು ಮಾಡಿದೆ. ಇದಲ್ಲದೆ ‘ಮಾಸ್ ಜಾತಾರ’ ಮತ್ತು ‘ಉಸ್ತಾದ್ ಭಗತ್ ಸಿಂಗ್’ ಎಂಬ ಸಿನಿಮಾಗಳಲ್ಲೂ ಅವರು ನಟಿಸುತ್ತಿದ್ದಾರೆ. ತನ್ನ ಡ್ಯಾನ್ಸ್ ಮೂಲಕ ಪಡ್ಡೆ ಹುಡುಗರನ್ನು ರೋಚ್ಚಿಗೆಬ್ಬಿಸುವ ಶ್ರೀಲೀಲಾ ‘ಪುಷ್ಪಾ-2’ ಸಿನಿಮಾದ ಐಟಂ ಸಾಂಗಿಗೆ ಸ್ಟೆಪ್ ಹಾಕಿದ್ದಾರೆ.

ಇದನ್ನೂ ಓದಿ- ವಿಚ್ಛೇದನ ವದಂತಿ ನಡುವೆ ‘ಬಚ್ಚನ್’ ಎಂಬ ಸರ್ ನೇಮ್ ಅನ್ನು ಕೈಬಿಟ್ಟಿದ್ದಾರಾ ಐಶ್ವರ್ಯ ರೈ? ಫ್ಯಾಕ್ಟ್ ಚೆಕ್ ಏನ್ ಹೇಳುತ್ತೆ?​

ನಂತರದ ಸ್ಥಾನದಲ್ಲಿರುವ ಆಶಿಕಾ ರಂಗನಾಥ್ ಈಗಾಗಲೇ ‘ಅಮಿಗೊಸ್’ ಮತ್ತು ‘ನಾನಾ ಸಾಮಿ ರಂಗ’ ಎಂಬ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಸದ್ಯ ಚಿರಂಜೀವಿ ಜೊತೆ ನಟಿಸಿರುವ ‘ವಿಶ್ವಂಭರ’ ತೆರೆಕಾಣಬೇಕಾಗಿದ್ದು, ಇನ್ನೂ ಕೆಲ ಚಿತ್ರಗಳ ಬಗ್ಗೆ ಮಾತುಕತೆ ನಡೆಯುತ್ತಿದೆ.

ರಶ್ಮಿಕಾ, ಶ್ರೀಲೀಲಾ ಮತ್ತು ಆಶಿಕಾ ರಂಗನಾಥ್ ಅಲ್ಲದೆ ‘ಜರ್ಸಿ’ ಸಿನಿಮಾ ಮೂಲಕ ತೆಲುಗಿಗೆ ಪಾದಾರ್ಪಣೆ ಮಾಡಿದ ಶ್ರದ್ಧಾ ಶ್ರೀನಾಥ್ ಗಮನ ಸೆಳೆದಿದ್ದಾರೆ. ‘ನನ್ನನ್ನು ದೋಚುಕುಂದುವಾಟೆ’ ಸಿನಿಮಾ ಮೂಲಕ ನಭಾ ನಟೇಶ್ ಕೂಡ ಭರವಸೆ ಮೂಡಿಸಿದ್ದಾರೆ. ಸಂಯುಕ್ತಾ ಹೆಡ್ಗೆ, ಕಾವ್ಯ ಶೆಟ್ಟಿ ಕೂಡ ತೆಲುಗಿನಲ್ಲಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕನ್ನಡದ ನಟಿಯರಿಗೆ ಹೆಚ್ಚೆಚ್ಚು ಸಂಭಾವನೆ ಸಿಗುತ್ತಿದೆ ಎನ್ನುವ ವರ್ತಮಾನ ಕೂಡ ಇದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News