ಸಿಹಿಗೆಣಸು-ಶಿವರಾತ್ರಿಗೂ ಇರುವ ಸಂಬಂಧವೇನು?; ಈ ದಿನವೇ ʼಸೂಪರ್‌ ಫುಡ್‌ʼ ಏಕೆ ತಿನ್ನಬೇಕು?

ಮಹಾ ಶಿವರಾತ್ರಿಯ ದಿನದಂದು ಭಕ್ತರು ಉಪವಾಸ ಮಾಡುತ್ತಾರೆ. ದಿನವಿಡಿ ಉಪವಾಸ ಇದ್ದು ಸಂಜೆ ವೇಳೆಗೆ ಅಂತ್ಯಗೊಳಿಸುತ್ತಾರೆ. ಉಪವಾಸ ಅಂತ್ಯಗೊಳಿಸಲು ಬೇಯಿಸಿದ ಸಿಹಿಗೆಣಸು ಸೇವಿಸುತ್ತಾರೆ. ಗೆಣಸು ತಿನ್ನುವುದರಿಂದ ಬೇಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ದೀರ್ಘಕಾಲದವರೆಗೆ ಶಕ್ತಿ ನೀಡುತ್ತದೆ ಎಂದು ಹೇಳಲಾಗುತ್ತದೆ.

Written by - Puttaraj K Alur | Last Updated : Feb 26, 2025, 03:33 PM IST
  • ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ
  • ಸಿಹಿ ಗೆಣಸು-ಶಿವರಾತ್ರಿ ಹಬ್ಬಕ್ಕೂ ಇರುವ ಸಂಬಂಧವೇನು?
  • ಈ ವಿಶೇಷ ದಿನದಂದೇ ಸಿಹಿಗೆಣಸನ್ನ ಏಕೆ ತಿನ್ನಬೇಕು?
ಸಿಹಿಗೆಣಸು-ಶಿವರಾತ್ರಿಗೂ ಇರುವ ಸಂಬಂಧವೇನು?; ಈ ದಿನವೇ ʼಸೂಪರ್‌ ಫುಡ್‌ʼ ಏಕೆ ತಿನ್ನಬೇಕು? title=
ಈ ದಿನವೇ ಸಿಹಿಗೆಣಸು ಏಕೆ ತಿನ್ನಬೇಕು?

Mahashivratri 2025: ನಾಡಿನೆಲ್ಲೆಡೆ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ಭಕ್ತರು ಅದ್ಧೂರಿಯಾಗಿ ಶಿವರಾತ್ರಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಬುಧವಾರ ಬೆಳಗ್ಗಿನಿಂದಲೇ ಶಿವನ ದೇವಸ್ಥಾನಗಳಲ್ಲಿ ಭಕ್ತ ಸಾಗರವೇ ಕಂಡುಬರುತ್ತಿದೆ. ಶಿವ ದೇವಸ್ಥಾನಗಳಲ್ಲಿ ವಿಶೇಷ ಅಭಿಷೇಕ, ರುದ್ರಾಭಿಷೇಕದೊಂದಿಗೆ ವಿಶೇಷ ಪೂಜಾ ಕಾರ್ಯಗಳು ನೆರವೇರುತ್ತಿವೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ಶಿವನ ದೇವಸ್ಥಾನಗಳಲ್ಲಿ ಭಕ್ತ ಸಾಗರವೇ ತುಂಬಿ ತುಳುಕುತ್ತಿವೆ. ಭಕ್ತರು ಸರತಿ ಸಾಲಿನಲ್ಲಿ ನಿಂತುಕೊಂಡು ಶಿವನ ದರ್ಶನವನ್ನ ಪಡೆಯುತ್ತಿದ್ದಾರೆ.

ಶಿವರಾತ್ರಿ ಪ್ರಯುಕ್ತ ಇಂದು ಬಹುತೇಕ ಜನರು ಉಪವಾಸ ಆಚರಣೆ ಮಾಡುತ್ತಿದ್ದಾರೆ. ಅನೇಕರು ತೊಟ್ಟು ನೀರು ಕುಡಿಯದೇ ಉಪವಾಸ ಆಚರಣೆ ಮಾಡುತ್ತಿದ್ದಾರೆ. ಶಿವರಾತ್ರಿ ಪ್ರಯುಕ್ತ ಉಪವಾಸ ಮಾಡುವವರು ʼಸೂಪರ್‌ ಫುಡ್‌ʼ ಸಿಹಿಗೆಣಸು ಸೇವಿಸುವ ಬಗ್ಗೆ ಖ್ಯಾತ ತಜ್ಞ ವೈದ್ಯರಾದ ಡಾ.ಅಂಜನಪ್ಪನವರು ವಿಶೇಷ ಮಾಹಿತಿ ಹಂಚಿಕೊಂಡಿದ್ದಾರೆ. ಸಿಹಿಗೆಣಸು ಮತ್ತು ಶಿವರಾತ್ರಿಗೂ ಇರುವ ಸಂಬಂಧವೇನು? ಈ ವಿಶೇಷ ದಿನದಂದೇ ಸಿಹಿಗೆಣಸನ್ನ ಏಕೆ ತಿನ್ನಬೇಕು? ಅನ್ನೋದರ ಬಗ್ಗೆ ಅವರು ಉಪಯುಕ್ತ ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಹೈ ಶುಗರ್ ಮಾತ್ರವಲ್ಲ, ಲೋ ಶುಗರ್ ಕೂಡಾ ಅಪಾಯಕಾರಿಯೇ!ನಿಮಗೂ ಹೀಗಾಗುತ್ತಿದ್ದರೆ ಎಚ್ಚೆತ್ತುಕೊಳ್ಳಿ

ಮಹಾ ಶಿವರಾತ್ರಿಯ ದಿನ ಉಪವಾಸ ಮತ್ತು ಜಾಗರಣೆ ಆಚರಣೆ ಮಾಡಲಾಗುತ್ತದೆ. ಭಗವಾನ್ ಶಿವನ ಆರಾಧನೆ ಮತ್ತು ಜಾಗರಣೆ ಬಳಿಕದ ಉಪವಾಸದ ನಂತರ ಸೇವಿಸುವ ಆಹಾರಗಳಲ್ಲಿ ಈ ಸಿಹಿಗೆಣಸು ಅತ್ಯಂತ ಪ್ರೀತಿಪಾತ್ರ ಆಹಾರವಾಗಿದೆ. ಹೆಚ್ಚಿನವರು ಶಿವರಾತ್ರಿಯ ದಿನ ಸಿಹಿಗೆಣಸು ತಿನ್ನಲು ಆಸಕ್ತಿ ತೋರಿಸುತ್ತಾರೆ. ಸಿಹಿಗೆಣಸು ಪ್ರಪಂಚದಾದ್ಯಂತ ಕಂಡುಬರುತ್ತದೆ. ಈ ಸಿಹಿಗೆಣಸನ್ನು ನಿಮ್ಮ ಆಹಾರದ ಭಾಗವಾಗಿ ಮಾಡಿಕೊಂಡರೆ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು ಎನ್ನುತ್ತಾರೆ ಡಾ.ಅಂಜನಪ್ಪನವರು. 

ʼಬಾಲ್ಯದಲ್ಲಿ ಶಿವರಾತ್ರಿ ಹಬ್ಬ ಬಂದರೆ ನಮಗೆ ತುಂಬಾ ಖುಷಿಯಾಗುತ್ತಿತ್ತು. ಏಕೆಂದರೆ ನಮ್ಮ ಅಮ್ಮ ನಮಗೆ ತಿನ್ನಲು ಬೇಯಿಸಿದ ಗೆಣಸು ನೀಡುತ್ತಿದ್ದರು. ನಮ್ಮಲ್ಲಿ ಪ್ರತಿಯೊಂದು ಹಬ್ಬಕ್ಕೂ ಒಂದೊಂದು ವೈಶಿಷ್ಟ್ಯತೆ ಇದೆ. ಗೌರಿ ಹಬ್ಬಕ್ಕೆ ಕಡಬು ಮಾಡುತ್ತಾರೆ, ಯುಗಾದಿ ಹಬ್ಬಕ್ಕೆ ಒಬ್ಬಟ್ಟು ಮಾಡುತ್ತಾರೆ, ಅದೇ ರೀತಿ ಶಿವರಾತ್ರಿಯಲ್ಲಿ ಗೆಣಸು ತಿನ್ನುತ್ತಾರೆ. ದೇವರು ಒಬ್ಬ ಅದ್ಭುತ ವಿಜ್ಞಾನಿ.. ಋತುಮಾನಕ್ಕೆ ತಕ್ಕಂತೆ ನಾವು ಹಣ್ಣು-ಹಂಪಲು ಸೇವಿಸುತ್ತೇವೆ. ಅದೇ ರೀತಿ ಶಿವರಾತ್ರಿ ವೇಳೆಗೆ ಸೂಪರ್‌ ಫುಡ್‌ ಸಿಹಿಗೆಣಸು ಬರುತ್ತದೆ. ಗೆಣಸಿನಲ್ಲಿ ಫೈಬರ್‌ ಜಾಸ್ತಿ ಹಾಗೂ ಶುಗರ್‌ ಕಡಿಮೆ ಇರುತ್ತದೆ. ಇದರ ಸೇವನೆಯಿಂದ ಬೇಗನೇ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಬಹಳ ಹೊತ್ತಿನವರೆಗೂ ಹಸಿವು ಆಗುವುದಿಲ್ಲʼಎಂದು ವೈದ್ಯರು ತಿಳಿಸಿದ್ದಾರೆ. 

ಇದನ್ನೂ ಓದಿ: ರಾತ್ರಿ ಊಟವಾದ ನಂತರ ಇದೊಂದು ಕೆಲಸ ಮಾಡಿ ಸಾಕು ! ಬ್ಲಡ್ ಶುಗರ್ ಎಷ್ಟು ಹೈ ಇದ್ದರೂ ಸಾಯುವವರೆಗೂ ನಾರ್ಮಲ್ ಆಗಿಯೇ ಇರುವುದು !

ಶಿವರಾತ್ರಿಯ ದಿನವೇ ಗೆಣಸನ್ನು ಏಕೆ ತಿನ್ನುತ್ತಾರೆ?

ಮಹಾ ಶಿವರಾತ್ರಿಯ ದಿನದಂದು ಭಕ್ತರು ಉಪವಾಸ ಮಾಡುತ್ತಾರೆ. ದಿನವಿಡಿ ಉಪವಾಸ ಇದ್ದು ಸಂಜೆ ವೇಳೆಗೆ ಅಂತ್ಯಗೊಳಿಸುತ್ತಾರೆ. ಉಪವಾಸ ಅಂತ್ಯಗೊಳಿಸಲು ಬೇಯಿಸಿದ ಸಿಹಿಗೆಣಸು ಸೇವಿಸುತ್ತಾರೆ. ಗೆಣಸು ತಿನ್ನುವುದರಿಂದ ಬೇಗ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದು ದೀರ್ಘಕಾಲದವರೆಗೆ ಶಕ್ತಿ ನೀಡುತ್ತದೆ ಎಂದು ಹೇಳಲಾಗುತ್ತದೆ. ಶಿವರಾತ್ರಿಯ ದಿನ ಹೆಚ್ಚಿನವರು ಎಚ್ಚರದಿಂದ ಇದ್ದು, ಶಿವನ ಜಪ ಮಾಡುತ್ತಾರೆ. ಶಿವನಾಮ ಸ್ಮರಣೆ ಮಾಡಿ, ಆತನ ಕೃಪೆಗೆ ಪಾತ್ರರಾಗುತ್ತಾರೆ. ರಾತ್ರಿಯಿಡಿ ಎಚ್ಚರವಾಗಿರಲು ಸಿಹಿಗೆಣಸು ತಿನ್ನುವುದರಿಂದ ದೇಹದ ಮೇಲೆ ನಿದ್ರಾಹೀನತೆಯ ಪರಿಣಾಮ ಕಡಿಮೆಯಾಗುತ್ತದೆ. ಹೀಗಾಗಿ ಶಿವರಾತ್ರಿ ಉಪವಾಸ ಮಾಡುವವರು ಇದನ್ನು ತಮ್ಮ ಆಹಾರದ ಭಾಗವಾಗಿ ಮಾಡಿಕೊಳ್ಳುತ್ತಾರೆ ಎಂದಿದ್ದಾರೆ. 

ದೇಹದ ತೂಕ ಕಡಿಮೆ ಮಾಡಲು, ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು  ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡಲು ಸಿಹಿಗೆಣಸು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಸಿಹಿಗೆಣಸನ್ನು ಮೂಲ ಆಹಾರ ಎಂದು ಕರೆಯುವುದುಂಟು. ಗೆಣಸು ಸೇವಿಸುವ ಮೂಲಕ ದೇಹವು ಅನೇಕ ಖನಿಜಗಳು ಮತ್ತು ವಿಟಮಿನ್‌ಗಳನ್ನು ಪಡೆಯುತ್ತದೆ. ವಿಶೇಷವಾಗಿ ಬೀಟಾ ಕ್ಯಾರೋಟಿನ್, ವಿಟಮಿನ್ A, C, E, B-6, ಪೊಟ್ಯಾಸಿಯಮ್ ಮತ್ತು ಫೈಬರ್ ಅಂಶಗಳು ಸಿಹಿಗೆಣಸಿನಲ್ಲಿ ಕಂಡುಬರುತ್ತವೆ. ಹೀಗಾಗಿ ಗೆಣಸು ಸೇವನೆಯಿಂದ ನೀವು ಹಲವಾರು ಆರೋಗ್ಯರ ಪ್ರಯೋಜನಗಳನ್ನು ಪಡೆಯುತ್ತೀರಿ ಎಂದು ಡಾ.ಅಂಜನಪ್ಪನವರು ತಿಳಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News