PV Sindhu Diet : ಭಾರತಕ್ಕೆ ಎರಡು ಬಾರಿ ಒಲಿಂಪಿಕ್ಸ್ ಪದಕ ಗೆದ್ದುಕೊಟ್ಟಿರುವ ಪಿವಿ ಸಿಂಧು ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ತನ್ನ ವೃತ್ತಿಜೀವನವನ್ನು ಎತ್ತರಕ್ಕೆ ಕೊಂಡೊಯ್ದ ಅವರು, ಡಿಸೆಂಬರ್ 22 ರಂದು ವೆಂಕಟ್ ದತ್ತಾ ಸಾಯಿ ಅವರೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.ಸಿಂಧು ವಯಸ್ಸು 29 ದಾಟಿದ್ದರೂ ಅವರ ಫಿಟ್‌ನೆಸ್ ಇಂದು ಕೂಡಾ ಟೀನೇಜರ್ ಗಳು ನಾಚುವಂತಿದೆ. ಬ್ಯಾಡ್ಮಿಂಟನ್ ಅಂಗಳದಲ್ಲಿ ಎದುರಾಳಿ ಆಟಗಾರರನ್ನು ಸೋಲಿಸಲು ಅವರು ತಮ್ಮ ಜೀವನಶೈಲಿ ಮತ್ತು ಆಹಾರಕ್ರಮದಲ್ಲಿ ಮಹತ್ತರ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ.
ಪಿವಿ ಸಿಂಧು ಆಹಾರ ಪದ್ಧತಿ :
ಬೆಳಗಿನ ಉಪಾಹಾರ ಅತ್ಯಂತ ಮುಖ್ಯವಾಗಿದೆ. ದಿನದ ಆರಂಭದಲ್ಲಿ ಆರೋಗ್ಯಕರ ಉಪಹಾರವನ್ನು ಸೇವಿಸುವುದು ಎಂದರೆ ಆರೋಗ್ಯಕರ ಜೀವನದತ್ತ ಮೊದಲ ಹೆಜ್ಜೆ ಇಡುತ್ತಿದ್ದೀರಿ ಎಂದೇ ಅರ್ಥ. ಹಾಗಾಗಿ ಬೆಳಗ್ಗಿನ ಉಪಹಾರದಲ್ಲಿ ಪಿವಿ ಸಿಂಧು ಮೊಟ್ಟೆ ಮತ್ತು ಹಾಲು ಸೇವಿಸುತ್ತಾರೆ. ಹಾಲಿನಲ್ಲಿ ಎಲ್ಲಾ ರೀತಿಯ ಪೋಷಕಾಂಶಗಳು ಕಂಡುಬರುವ ಕಾರಣದಿಂದ ಇದೊಂದು ಪರಿಪೂರ್ಣ ಆಹಾರ. ಇನ್ನು ಮೊಟ್ಟೆಯಲ್ಲಿ ಪ್ರೋಟೀನ್ ಸಮೃದ್ದವಾಗಿರುತ್ತದೆ.
ಇದನ್ನೂ ಓದಿ : Diabetes: ಈ ತರಕಾರಿಯನ್ನು ಪ್ರತಿನಿತ್ಯ ಸೇವಿಸುವುದರಿಂದ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!
ಮಧ್ಯಾಹ್ನದ ಊಟ :
ಪಿವಿ ಸಿಂಧು, ಮಧ್ಯಾಹ್ನ ಗ್ರಿಲ್ಡ್ ಚಿಕನ್ ಮತ್ತು ಅನ್ನವನ್ನು ಸೇವಿಸುತ್ತಾರೆ. ಅನೇಕ ರೀತಿಯ ತರಕಾರಿಗಳು ಕೂಡಾ ಅವರ ಮಧ್ಯಾಹ್ನದ ಊಟದ ಭಾಗ. ಈ ಮೂಲಕ ಅವರು ಸಾಕಷ್ಟು ಕಾರ್ಬೋಹೈಡ್ರೇಟ್ ಗಳು ಮತ್ತು ಪ್ರೋಟೀನ್ ಗಳನ್ನು ಪಡೆಯುತ್ತಾರೆ.
ಸಂಜೆ ಲಘು ಉಪಹಾರ:
ಸಂಜೆ ಸ್ವಲ್ಪ ಹಸಿವಾದಾಗ ಸಿಂಧು ಲಘು ಆಹಾರ ಸೇವಿಸುತ್ತಾರೆ. ಈ ಸಮಯದಲ್ಲಿ, ಹುರಿದ ಒಣ ಹಣ್ಣುಗಳು ಮತ್ತು ತಾಜಾ ಹಣ್ಣುಗಳಿಗೆ ಪ್ರಾಧಾನ್ಯತೆ. ಇದರಿಂದ ಎನರ್ಜಿ ಸಿಗುತ್ತದೆ ಜೊತೆಗೆ ಹಸಿವಿನ ಕಡುಬಯಕೆಗಳನ್ನು ನಿಗ್ರಹಿಸುವುದು ಸಾಧ್ಯವಾಗುತ್ತದೆ.
ವ್ಯಾಯಾಮದ ಸಮಯದಲ್ಲಿನ ಆಹಾರ :
ವ್ಯಾಯಾಮದ ಸಮಯದಲ್ಲಿ ಯಾವುದೇ ದೌರ್ಬಲ್ಯವನ್ನು ಎದುರಿಸಬಾರದು ಎನ್ನುವ ಉದ್ದೇಶದಿಂದ ಬಾಳೆಹಣ್ಣು ತಿನ್ನುತ್ತಾರೆ. ಜಿಮ್ ನಂತರ ಅವರು ಪ್ರೋಟೀನ್ ಶೇಕ್ ಮತ್ತು ಎನರ್ಜಿ ಬಾರ್ ಅನ್ನು ಸೇವಿಸುತ್ತಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ರಾತ್ರಿ ಊಟ :
ಉತ್ತಮ ಆರೋಗ್ಯಕ್ಕಾಗಿ ಪಿವಿ ಸಿಂಧು ರಾತ್ರಿ ಊಟವನ್ನು ಬೇಗನೆ ಮಾಡಲು ಇಷ್ಟಪಡುತ್ತಾರೆ. ಹಾಗಾಗಿ ಅವರ ಜೀರ್ಣಕ್ರಿಯೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಈ ಸಮಯದಲ್ಲಿ ಅವರು ಅನ್ನದೊಂದಿಗೆ ಹಸಿರು ತರಕಾರಿಗಳನ್ನು ಸೇವಿಸುತ್ತಾರೆ. ಇವರ ಆಹಾರದಲ್ಲಿ ಎಣ್ಣೆಯ ಬಳಕೆ ತೀರಾ ಕಡಿಮೆಯಾಗಿರುತ್ತದೆ.
ಚೀಟಿಂಗ್ ಡೇ :
ಪಿವಿ ಸಿಂಧು ತನ್ನ ಕಟ್ಟುನಿಟ್ಟಿನ ಡಯಟ್ ಮತ್ತು ಫಿಟ್‌ನೆಸ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇವೆಲ್ಲದರ ನಡುವೆ ವಾರದಲ್ಲಿ ಒಂದು ದಿನ ಚೀಟಿಂಗ್ ಡೇ ಎಂದು ಮಾಡಿ, ಆ ದಿನ ತನಗೆ ಇಷ್ಟವಾದ ಆಹಾರ ಸೇವಿಸುತ್ತಾರೆ. ಅಂದು ಅವರು ಹೈದರಾಬಾದಿ ಬಿರಿಯಾನಿ ಮತ್ತು ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.