Deadly virus: ಕೊರೊನಾ ಸಾಂಕ್ರಾಮಿಕದ ಹಿಡಿತದಿಂದ ನಾವು ಈಗಷ್ಟೇ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇವೆ. ಇಂತಹ ಮಾರಕ ಸಾಂಕ್ರಾಮಿಕ ರೋಗ ಮತ್ತೆಂದೂ ವಕ್ಕರಿಸಿಕೊಳ್ಳಬಾರದು ಎಂದುಕೊಳ್ಳುವಾಗಲೇ ಕಾಂಗೋದಲ್ಲಿ ಒಂದು ನಿಗೂಢ ರೋಗ ಹರಡಿ 50 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಎಂಬ ಸುದ್ದಿ ಸದ್ಯ ಹೊರಬಿದ್ದಿದೆ.
ವಿಶ್ವ ಆರೋಗ್ಯ ಸಂಸ್ಥೆಯು ಕಾಂಗೋದಲ್ಲಿ ನಿಗೂಢ ರೋಗವೊಂದು ವೇಗವಾಗಿ ಹರಡಿದ್ದು, 50 ಕ್ಕೂ ಹೆಚ್ಚು ಜನರ ಪ್ರಾಣವನ್ನು ಬಲಿ ಪಡೆದಿದೆ ಎಂದು ವರದಿ ಮಾಡಿದೆ. ಈ ನಿಗೂಢ ರೋಗವು ಯಾರನ್ನೂ ಭಾರಿಸದೆ ರೋಗಲಕ್ಷಣಗಳು ಪ್ರಾರಂಭವಾದ 48 ಗಂಟೆಗಳಲ್ಲಿ ಪ್ರಾಣವನ್ನು ಕಸಿದುಕೊಂಡಿದೆ. "ಇದು ಅತ್ಯಂತ ಚಿಂತಾಜನಕ ಪರಿಸ್ಥಿತಿ" ಎಂದು ಪಿಕೊರೊ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಸೆರ್ಜ್ ನಗೆಲೆಬಾಟೊ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಸಕ್ಕರೆ ಕಾಯಿಲೆಗೆ ಮಾಹಾ ಮದ್ದು..! ಈ ಬಿಜವನ್ನು ನೀರಿನಲ್ಲಿ ನೆನಸಿ ಕುಡಿದರೆ ಯಾವುದೇ ಕಾರಣಕ್ಕೂ ಹೆಚ್ಚಾಗಲ್ಲ ಶುಗರ್
ಜನವರಿ 21 ರಂದು ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದಲ್ಲಿ ಒಂದು ನಿಗೂಢ ರೋಗ ಹರಡಲು ಪ್ರಾರಂಭಿಸಿದ್ದು, ರೋಗ ಹರಡಿದಾಗಿನಿಂದ, ಸುಮಾರು 53 ಜನರು ಸಾವನ್ನಪ್ಪಿದ್ದಾರೆ ಮತ್ತು 419 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಕಾಂಗೋದಲ್ಲಿ ಹರಡುತ್ತಿರುವ ಈ ನಿಗೂಢ ರೋಗವು ಮನುಷ್ಯರನ್ನು ಹೇಗೆ ಆಕ್ರಮಿಸಿತು ಮತ್ತು ಅದು ಯಾವ ಲಕ್ಷಣಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿ...
ಇದನ್ನೂ ಓದಿ: ಈ ರಕ್ತದ ಗುಂಪನವರಿಗ ಮೆದುಳಿನ ಪಾರ್ಶ್ವವಾಯು ಬರುವ ಅಪಾಯ ಹೆಚ್ಚು!
ಈ ರೋಗ ಹರಡಿದ್ದೇಗೆ..?
ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಕಚೇರಿಯ ಪ್ರಕಾರ, ಪೊಲೊಕ್ವೇನ್ನಲ್ಲಿ ಬಾವಲಿ ಮಾಂಸ ತಿಂದ ನಂತರ 3 ಮಕ್ಕಳು ನಿಗೂಢ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈ ಮಾಂಸವನ್ನು ಸೇವಿಸಿದ 3 ಮಕ್ಕಳು ರಕ್ತಸ್ರಾವ ಜ್ವರದ ಲಕ್ಷಣಗಳೊಂದಿಗೆ 48 ಗಂಟೆಗಳಲ್ಲಿ ಸಾವನ್ನಪ್ಪಿದರು. ರಕ್ತಸ್ರಾವವಾಗುವ ಮೊದಲು ದೇಹದೊಳಗೆ ತೀವ್ರವಾಗಿತ್ತೆಂದರೆ ಅಂಗಾಂಗಗಳು ವಿಫಲಗೊಳ್ಳಲು ಪ್ರಾರಂಭಿಸಿದವು. ಸೋಂಕಿನ ತ್ವರಿತ ಹರಡುವಿಕೆಯು ಆರೋಗ್ಯ ತಜ್ಞರನ್ನು ಗೊಂದಲ ಮತ್ತು ಕಳವಳಕ್ಕೆ ಒಳಪಡಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಆಫ್ರಿಕಾ ಕಚೇರಿಯು ಬಾವಲಿ ಮಾಂಸ ಮತ್ತು ಈ ನಿಗೂಢ ಕಾಯಿಲೆಯ ಹರಡುವಿಕೆಯ ನಡುವಿನ ಸಂಬಂಧವನ್ನು ದೃಢಪಡಿಸಿದೆ ಮತ್ತು ಕಾಂಗೋದಲ್ಲಿ ನಿಗೂಢ ರೋಗ ಪ್ರಕರಣಗಳ ಹೆಚ್ಚಳಕ್ಕೆ ಬಾವಲಿ ಮಾಂಸವೇ ಕಾರಣ ಎಂಬುದನ್ನು ಖಚಿತ ಪಡಿಸಿದೆ.ಮನುಷ್ಯರನ್ನು ಬಾಧಿಸುವ ಅನೇಕ ಮಾರಕ ರೋಗಗಳು ಹೆಚ್ಚಾಗಿ ಪ್ರಾಣಿಗಳಿಂದ ಹರಡುತ್ತವೆ. ಇದಲ್ಲದೆ, ಆಫ್ರಿಕನ್ ಪ್ರದೇಶಗಳಲ್ಲಿ, ಜನರು ಬಹಳಷ್ಟು ಕಾಡು ಪ್ರಾಣಿಗಳು ಮತ್ತು ಬಾವಲಿ ಮಾಂಸವನ್ನು ಸೇವಿಸುತ್ತಾರೆ, ಇದು ಈ ಪ್ರದೇಶಗಳಲ್ಲಿ ಪ್ರಾಣಿಗಳಿಂದ ಮನುಷ್ಯರಿಗೆ ಗಂಭೀರ ವೈರಸ್ಗಳು ಹರಡಲು ಕಾರಣವಾಗುತ್ತದೆ ಮತ್ತು ಸಾವಿಗೆ ದಾರಿ ಮಾಡಿ ಕೊಡುತ್ತದೆ. ಕಳೆದ ದಶಕದಲ್ಲಿ ಆಫ್ರಿಕಾದಲ್ಲಿ ಇಂತಹ ಏಕಾಏಕಿ ಸಂಭವಿಸುವ ಪ್ರಕರಣಗಳ ಸಂಖ್ಯೆ ಶೇಕಡಾ 60 ಪ್ರತಿಶತ ಹೆಚ್ಚಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳುತ್ತದೆ.
ಈ ತಿಂಗಳ ಆರಂಭದಲ್ಲಿ ಬೊಮೆಟ್ ನಗರದಲ್ಲಿ ಕನಿಷ್ಠ 13 ರೋಗಿಗಳ ರಕ್ತದ ಮಾದರಿಗಳನ್ನು ಕಾಂಗೋಲೀಸ್ ರಾಜಧಾನಿ ಕಿನ್ಶಾಸಾದಲ್ಲಿರುವ ರಾಷ್ಟ್ರೀಯ ಜೈವಿಕ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರಲ್ಲಿ ಕೆಲವರಿಗೆ ಮಲೇರಿಯಾ ಇರುವುದು ದೃಢಪಟ್ಟಿದ್ದರೂ, ಯಾರಿಗೂ ಎಬೋಲಾ ಅಥವಾ ಮಾರ್ಬರ್ಗ್ನಂತಹ ಸಾಮಾನ್ಯ ರಕ್ತಸ್ರಾವ ಜ್ವರ ಕಾಯಿಲೆಗಳು ಸೋಂಕಿಗೆ ಒಳಗಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.