ಹೊಸ ವರ್ಷದಲ್ಲಿ ಅಲ್ಟ್ರಾವೈಲೆಟ್ ಬೈಕ್ ಖರೀದಿ ಆಗಲಿದೆ ದುಬಾರಿ..! ಆಸಕ್ತರು ಈಗಲೇ ಖರೀದಿಸಿ..!

ಅಲ್ಟ್ರಾವೈಲೆಟ್ F77 MACHನ ಬೆಲೆ ಹೊಸ ವರ್ಷದಿಂದ ದುಬಾರಿಯಾಗಲಿದೆ. ಕಂಪನಿ ಈಗಾಗಲೇ ಕೆಲವು ಆಯ್ದ ರೂಪಾಂತರಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿದ್ದು, 2025ರ ಆರಂಭದಿಂದ ಹೊಸ ಬೆಲೆ ಜಾರಿಯಾಗಲಿದೆ.  

Written by - Yashaswini V | Last Updated : Dec 11, 2024, 03:38 PM IST
  • ಹೊಸ ವರ್ಷಕ್ಕೂ ಮೊದಲೇ ಗ್ರಾಹಕರಿಗೆ ಶಾಕ್
  • ಪ್ರಸಿದ್ದ ಎಲೆಕ್ಟ್ರಿಕ್ ಬೈಕ್ ಬೆಲೆ ಏರಿಕೆ
  • ಅಲ್ಟ್ರಾವೈಲೆಟ್ ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಬೈಕ್ ಬೆಲೆ ಏರಿಕೆ
ಹೊಸ ವರ್ಷದಲ್ಲಿ ಅಲ್ಟ್ರಾವೈಲೆಟ್ ಬೈಕ್ ಖರೀದಿ ಆಗಲಿದೆ ದುಬಾರಿ..!  ಆಸಕ್ತರು ಈಗಲೇ ಖರೀದಿಸಿ..!  title=

Ultraviolet Bike: ಪೆಟ್ರೋಲ್-ಡೀಸೆಲ್ ಬೆಲೆ ದಿನೇ ದಿನೇ ಆಗಸಕ್ಕೆ ಮುತ್ತಿಕ್ಕುತ್ತಿದೆ. ಹೀಗಾಗಿ, ಜನರು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಮುಖಮಾಡುತ್ತಿದ್ದಾರೆ. ಆದರೀಗ ಪ್ರಸಿದ್ದ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ತಯಾರಿಕಾ ಕಂಪನಿ ಅಲ್ಟ್ರಾವೈಲೆಟ್ ತನ್ನ ಗ್ರಾಹಕರಿಗೆ ಹೊಸ ವರ್ಷಕ್ಕೂ ಮೊದಲೇ ಬಿಗ್ ಶಾಕ್ ನೀಡಿದೆ. 

ವಾಸ್ತವವಾಗಿ, ಎಲೆಕ್ಟ್ರಿಕ್ ಮೋಟಾರ್ ಸೈಕಲ್ ತಯಾರಿಕಾ ಕಂಪನಿ ಅಲ್ಟ್ರಾವೈಲೆಟ್ ತನ್ನ ಪ್ರಮುಖ ಮಾದರಿಯಾದ Ultraviolette F77 MACH 2 ಬೆಲೆಯಲ್ಲಿ ಏರಿಕೆಯನ್ನು ಘೋಷಿಸಿದೆ.  ಆದಾಗ್ಯೂ, ಈ ವರ್ಷಾಂತ್ಯದವರೆಗೂ ಪ್ರಸ್ತುತ ಬೆಲೆಯಲ್ಲೇ ಅಲ್ಟ್ರಾವೈಲೆಟ್ F77 MACH ಖರೀದಿಸಬಹುದಾಗಿದ್ದು, ಹೊಸ ಬೆಲೆಗಳು 01 ಜನವರಿ 2025ರಿಂದ ಜಾರಿಗೆ ಬರಲಿದೆ. 

ಇದನ್ನೂ ಓದಿ- ತಿಂಗಳಿಗೆ 80-85ಸಾವಿರ ದುಡಿಯುವ ಬೆಂಗಳೂರು ಉಬರ್ ಡ್ರೈವರ್: ವಿಡಿಯೋ ವೈರಲ್

ಎಲೆಕ್ಟ್ರಿಕ್ ಬೈಕ್ ಬೆಲೆಯಲ್ಲಿ ಎಷ್ಟು ಹೆಚ್ಚಳವಾಗಿದೆ? 
ಅಲ್ಟ್ರಾವೈಲೆಟ್ ಕಂಪನಿಯಿಂದ ಲಭ್ಯವಿರುವ ಮಾಹಿತಿಯ ಪ್ರಕಾರ, Ultraviolette F77 MACH ಎಲೆಕ್ಟ್ರಿಕ್ ಬೈಕ್  ನ ಆರಂಭಿಕ ಬೆಲೆ 
2.99 ಲಕ್ಷ ರೂ. ಆಗಿರಲಿದೆ. ಆದರೆ, ಇದರ ಕೆಲವು ಆಯ್ದ ಮಾಡೆಲ್‌ಗಳಲ್ಲಿ ಮಾತ್ರ ಬೆಲೆಯನ್ನು 5% ನಷ್ಟು  ಹೆಚ್ಚಿಸಲಾಗುವುದು ಎಂದು ತಿಳಿದುಬಂದಿದೆ. 

ಇದನ್ನೂ ಓದಿ- 8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್..! ಮೂಲ ವೇತನದಲ್ಲಿ ಭಾರೀ ಹೆಚ್ಚಳ...! 

ಎಲೆಕ್ಟ್ರಿಕ್ ಬೈಕ್ ಬೆಲೆ ಏರಿಕೆಗೆ ಇದೇ ಪ್ರಮುಖ ಕಾರಣ: 
ಇನ್ನೂ ಬೆಲೆ ಏರಿಕೆ ಬಗ್ಗೆಯೂ ಕಾರಣ ಉಲ್ಲೇಖಿಸಿರುವ ಕಂಪನಿ ಇನ್‌ಪುಟ್ ವೆಚ್ಚಗಳು ಮತ್ತು ಬದಲಾಗುತ್ತಿರುವ ಮಾರುಕಟ್ಟೆಯ ಡೈನಾಮಿಕ್ಸ್‌ನಿಂದಾಗಿ ತನ್ನ ಕಂಪನಿಯ ಎಲೆಕ್ಟ್ರಿಕ್ ಬೈಕ್ ಗಳಲ್ಲಿ ಬೆಲೆ ಏರಿಕೆಯ ನಿರ್ಧಾರ ಕೈಗೊಳ್ಳುತ್ತಿರುವುದಾಗಿ ತಿಳಿಸಿದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News