KG Basin gas dispute Case: ONGC ಸೆಬಿ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದೆಯೇ... ನಿಜವಾದ ಸಂಗತಿ ಏನು?

ಕೆಜಿ ಬೇಸಿನ್‌ ಗ್ಯಾಸ್ ವಿವಾದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಒಎನ್‌ಜಿಸಿ ಪರವಾಗಿ ತೀರ್ಪು ನೀಡಿದೆ. ಈ ತೀರ್ಪಿನೊಂದಿಗೆ ಸರ್ಕಾರಿ ಸ್ವಾಮ್ಯದ ಒಎನ್‌ಜಿಸಿಗೆ 25,000 ಕೋಟಿ ರೂ.ಗಳ ಪರಿಹಾರ ದೊರೆಯಲಿದೆ.

Written by - Puttaraj K Alur | Last Updated : Feb 26, 2025, 08:06 PM IST
  • ಕೆಜಿ ಬೇಸಿನ್‌ ಗ್ಯಾಸ್ ವಿವಾದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ONGC ಪರ ತೀರ್ಪು ನೀಡಿದೆ
  • ಈ ತೀರ್ಪಿನಿಂದ ಸರ್ಕಾರಿ ಸ್ವಾಮ್ಯದ ONGCಗೆ 25,000 ಕೋಟಿ ರೂ.ಗಳ ಪರಿಹಾರ ದೊರೆಯಲಿದೆ
  • ONGC ತನ್ನ ಷೇರುದಾರರಿಗೆ ಆ ಮಾಹಿತಿ ಬಹಿರಂಗಪಡಿಸುವ ಅಗತ್ಯವಿಲ್ಲವೆಂದು ತಜ್ಞರು ಸ್ಪಷ್ಟಪಡಿಸಿದ್ದಾರೆ
KG Basin gas dispute Case: ONGC ಸೆಬಿ ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದೆಯೇ... ನಿಜವಾದ ಸಂಗತಿ ಏನು? title=
ಕೆಜಿ ಬೇಸಿನ್‌ ಗ್ಯಾಸ್‌ ವಿವಾದ

KG Basin gas dispute Case: ಕೆಜಿ ಬೇಸಿನ್‌ ಗ್ಯಾಸ್‌ ವಿವಾದ ಪ್ರಕರಣದಲ್ಲಿ ದೆಹಲಿ ಹೈಕೋರ್ಟ್ ಒಎನ್‌ಜಿಸಿ ಪರವಾಗಿ ತೀರ್ಪು ನೀಡಿದೆ. ಫೆಬ್ರವರಿ 14ರಂದು ಹೊರಡಿಸಲಾದ ಈ ತೀರ್ಪಿನ ಪ್ರಕಾರ, ಸರ್ಕಾರಿ ಸ್ವಾಮ್ಯದ ONGCಗೆ ರಿಲಯನ್ಸ್‌ನಿಂದ 25,000 ಕೋಟಿ ರೂ. ದಂಡವನ್ನು ಸಂಗ್ರಹಿಸಲು ಅವಕಾಶ ನೀಡುತ್ತದೆ. ಆದರೆ ಈ ಬಗ್ಗೆ ಒಎನ್‌ಜಿಸಿ ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿಗೆ (SEBI) ಯಾವುದೇ ಮಾಹಿತಿಯನ್ನು ನೀಡಿಲ್ಲವೆಂದು ವರದಿಯಾಗಿದೆ.

ಸೆಬಿ ನಿಯಮಗಳ ಪ್ರಕಾರ, ಷೇರು ವಿನಿಮಯ ಕೇಂದ್ರದಲ್ಲಿ ಲಿಸ್ಟ್‌ ಆದ ಕಂಪನಿಗಳು, ತಮ್ಮ ಕಂಪನಿಯ ಷೇರು ಬೆಲೆಯ ಮೇಲೆ ಪರಿಣಾಮ ಬೀರುವ ಮಾಹಿತಿಯನ್ನು ಷೇರುದಾರರಿಗೆ ಬಹಿರಂಗಪಡಿಸಬೇಕಾಗುತ್ತದೆ. ಆದರೆ ಒಎನ್‌ಜಿಸಿ ತನ್ನ ಷೇರುದಾರರಿಗೆ ಆ ಮಾಹಿತಿಯನ್ನು ಬಹಿರಂಗಪಡಿಸುವ ಅಗತ್ಯವಿಲ್ಲವೆಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಏಕೆಂದರೆ ಈ ಪ್ರಕರಣದಲ್ಲಿ ಒಎನ್‌ಜಿಸಿ ಭಾಗಿಯಾಗಿಲ್ಲ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ರಿಲಯನ್ಸ್ ಇಂಡಸ್ಟ್ರೀಸ್ ವಿರುದ್ಧ ಪ್ರಕರಣ ದಾಖಲಿಸಿದೆ.

ಇದನ್ನೂ ಓದಿ: ಉದ್ಯೋಗಿಗಳಿಗೆ ಮಾತ್ರವಲ್ಲ, ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಸಿಗುವುದು ಪಿಂಚಣಿ! ಪ್ರತಿಯೊಬ್ಬರಿಗೂ ತಿಳಿದಿರಬೇಕಾದ ವಿಚಾರ

ಏನಿದು ಕೆಜಿ ಬೇಸಿನ್‌ ಗ್ಯಾಸ್‌ ವಿವಾದ?

2003ರಲ್ಲಿ ಕೆಜಿ ಬೇಸಿನ್‌ನಲ್ಲಿರುವ ಒಎನ್‌ಜಿಸಿ ಬ್ಲಾಕ್‌ಗಳಿಂದ ರಿಲಯನ್ಸ್ ಇಂಡಸ್ಟ್ರೀಸ್ ಅಕ್ರಮವಾಗಿ ನೈಸರ್ಗಿಕ ಅನಿಲವನ್ನು ಹೊರತೆಗೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಲಾಗಿತ್ತು. ದೆಹಲಿ ಹೈಕೋರ್ಟ್‌ನಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆದರೆ ಏಕಸದಸ್ಯ ಪೀಠವು ರಿಲಯನ್ಸ್ ಪರವಾಗಿ ತೀರ್ಪು ನೀಡಿತು. ಈ ತೀರ್ಪನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ರೇಖಾ ಪಾಟೀಲ್ ಮತ್ತು ಸೌರವ್ ಬ್ಯಾನರ್ಜಿ ಅವರ ವಿಭಾಗೀಯ ಪೀಠವು ರದ್ದುಗೊಳಿಸಿತು. ಮೇ 2023ರಲ್ಲಿ ನ್ಯಾಯಾಧೀಶರು ರಿಲಯನ್ಸ್ ಪರವಾಗಿ ಮಧ್ಯಸ್ಥಿಕೆ ತೀರ್ಪನ್ನು ರದ್ದುಗೊಳಿಸಲು ಸಾಕಷ್ಟು ಆಧಾರಗಳಿವೆ ಎಂದು ಅಭಿಪ್ರಾಯಪಟ್ಟಿದ್ದರು.

ಗಮನಿಸಬೇಕಾದ ಸಂಗತಿಯೆಂದರೆ, ರಿಲಯನ್ಸ್ ಅದರ ವಿದೇಶಿ ಜಂಟಿ ಉದ್ಯಮಗಳಾದ ಯುಕೆ ಮೂಲದ ಬಿಪಿ ಮತ್ತು ಕೆನಡಾದ ನಿಕೊ ರಿಚೋಸ್ ಜೊತೆಗೆ, ನಿಷೇಧಿತ ಪ್ರದೇಶಗಳಿಂದ ತೈಲ ಸಂಪನ್ಮೂಲಗಳನ್ನು ನಿಯಮಗಳಿಗೆ ವಿರುದ್ಧವಾಗಿ ಹೊರತೆಗೆದ ಮತ್ತು $1.729 ಬಿಲಿಯನ್ ಮೌಲ್ಯದ ತೈಲ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿದ ಆರೋಪವನ್ನು ಎದುರಿಸುತ್ತಿದೆ.

ಇದನ್ನೂ ಓದಿ40,000 ತೆರಿಗೆದಾರರ ವಿರುದ್ಧ ಕ್ರಮಕ್ಕೆ ಮುಂದಾದ ಆದಾಯ ತೆರಿಗೆ ಇಲಾಖೆ.. ಇಂತಹವರಿಗೆ ತಪ್ಪಿದ್ದಲ್ಲ ಸಮಸ್ಯೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News