Income Tax Notice: ಬಜೆಟ್ 2025ರಲ್ಲಿ ಕೋಟ್ಯಾಂತರ ತೆರಿಗೆದಾರರಿಗೆ ಮೋದಿ ಸರ್ಕಾರದಿಂದ ಭರ್ಜರಿ ಉಡುಗೊರೆ ದೊರೆತಿದೆ. 12ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತ ಗೊಳಿಸುವ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತೆರಿಗೆದಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಇದೀಗ ಸರ್ಕಾರ ಎಷ್ಟೇ ಸೌಕರ್ಯಗಳನ್ನು ಒದಗಿಸಿದರೂ ಆದಾಯ ತೆರಿಗೆ ಕಟ್ಟದೆ ವಂಚಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ, ಆದಾಯ ತೆರಿಗೆ ಇಲಾಖೆ ಸಜ್ಜಾಗಿದೆ.
40,000 ತೆರಿಗೆದಾರರ ವಿರುದ್ಧ ಕ್ರಮ:
ದೇಶಾದ್ಯಂತ ತೆರಿಗೆ ವಂಚನೆಯ ವಿರುದ್ದ ದೊಡ್ಡ ಅಭಿಯಾನವನ್ನು ಪ್ರಾರಂಭಿಸಲು ಆದಾಯ ತೆರಿಗೆ ಇಲಾಖೆ ಸಜ್ಜಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ಟಿಡಿಎಸ್/ಟಿಸಿಎಸ್ ಕಡಿತಗೊಳಿಸದ ಅಥವಾ ಠೇವಣಿ ಮಾಡದೆ ಇರುವ ಜನರು ಮತ್ತು ಕಂಪನಿಗಳ ವಿರುದ್ಧ ಈ ಅಭಿಯಾನ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ರೀತಿ ಸುಮಾರು 40,000 ತೆರಿಗೆದಾರರು ವಂಚನೆಯ ಪಟ್ಟಿಯಲ್ಲಿ ಇದ್ದಾರೆ. 2022 ರಿಂದ 2024 ರ ಸಂಪೂರ್ಣ ಹಣಕಾಸು ವರ್ಷದಲ್ಲಿ ಕಡಿತಗೊಳಿಸಲಾದ ತೆರಿಗೆಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಟಿಡಿಎಸ್ ಡೀಫಾಲ್ಟರ್‌ಗಳನ್ನು ಹಿಡಿಯಲು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) 16 ಅಂಶಗಳ ಯೋಜನೆಯನ್ನು ಹೂಡಿಕೊಂಡಿದ್ದು, ಡೇಟಾ ವಿಶ್ಲೇಷಣಾ ತಂಡವು ಈ ರೀತಿಯ ತೆರಿಗೆದಾರರ ಸಂಪೂರ್ಣ ಪಟ್ಟಿಯನ್ನು ಸಿದ್ಧಪಡಿಸುವ ಮೂಲಕ ಇವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ.
ತೆರಿಗೆ ವಂಚನೆ ಮಾಡುವವರಿಗೆ ಎಚ್ಚರಿಕೆ:
ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುವವರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಆರಂಭಿಸುತ್ತಿರುವ ಆದಾಯ ತೆರಿಗೆ ಇಲಾಖೆ, ವರ್ಷಗಳಿಂದ ತೆರಿಗೆ ಕಟ್ಟದೇ ಇರುವವರಿಗೆ ಮೊದಲಿಗೆ ಎಚ್ಚರಿಕೆ ನೀಡಲಿದೆ. ಇದಕ್ಕೇ ಅವರು ಸರಿಯಾಗಿ ಪ್ರತಿಕ್ರಿಯಿಸದಿದ್ದರೆ, ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ತೆರಿಗೆ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ- IRCTC Confirm Ticket: ಟ್ರೈನ್ ಹೊರಡುವ ಕೆಲ ನಿಮಿಷ ಮೊದಲೂ ಸಿಗುತ್ತೆ ಕನ್ಫರ್ಮ್ ಟಿಕೆಟ್, ಜಸ್ಟ್ ಹೀಗೆ ಟಿಕೆಟ್ ಬುಕ್ ಮಾಡಿ..!
ತೆರಿಗೆ ಕಡಿತ ಮತ್ತು ಮುಂಗಡ ತೆರಿಗೆ ಪಾವತಿಯ ನಡುವೆ ದೊಡ್ಡ ವ್ಯತ್ಯಾಸವಿರುವ ಪ್ರಕರಣಗಳು ಸೇರಿಂದಂತೆ, ತೆರಿಗೆ ಕಡಿತಗೊಳಿಸುವ ನೆಪದಲ್ಲಿ ಆಗಾಗ್ಗೆ ತಿದ್ದುಪಡಿಗಳು ಮತ್ತು ಇತರ ಬದಲಾವಣೆಗಳು ಆಗಿರುವ ಪ್ರಕರಣಗಳ ಮೇಲೆ ತೆರಿಗೆ ಇಲಾಖೆ ಪ್ರಮುಖವಾಗಿ ನಿಗಾವಹಿಸಲಿದೆ. ಅಷ್ಟೇ ಅಲ್ಲದೆ ಇದೆ ರೀತಿ ತೆರಿಗೆ ನಿಯಮ ಉಲ್ಲಂಘಿಸಿದ ಕಂಪನಿಗಳನ್ನು ಸಹ ತನಿಖೆಗೆ ಒಳಪಡಿಸಲಾಗುವುದು ಎಂದವರು ಮಾಹಿತಿ ನೀಡಿದ್ದಾರೆ.
ಆದಾಯ ತೆರಿಗೆ ಕಾಯ್ದೆ ಪ್ರಕಾರ ಸೆಕ್ಷನ್ 40(a)(ia) ಅಡಿಯಲ್ಲಿ ದೊಡ್ಡ ಮೊತ್ತದ ತೆರಿಗೆ ಬಾಕಿ ನೀಡದ ಪ್ರಕರಣಗಳ ವರದಿ ಮಾಡಲು ತೆರಿಗೆ ಮಂಡಳಿಯು ಮೌಲ್ಯಮಾಪನ ಅಧಿಕಾರಿಗಳನ್ನು ನೇಮಿಸಿರುತ್ತದೆ. ಟಿಡಿಎಸ್ ಕಡಿತಗೊಳಿಸದ ಅಥವಾ ಸರ್ಕಾರಕ್ಕೆ ಠೇವಣಿ ಇಡದೇ ಇರುವವರಿಗೆ ತೆರಿಗೆ ಕಡಿತಕ್ಕೆ ಈ ವಿಭಾಗವು ಅನುಮತಿ ನೀಡುವುದಿಲ್ಲ . ಟಿಡಿಎಸ್ ರಿಟರ್ನ್‌ಗಳನ್ನು ಹಲವು ಬಾರಿ ತಿದ್ದುಪಡಿ ಮಾಡಲಾದ ಮತ್ತು ಡೀಫಾಲ್ಟ್ ಮೊತ್ತವು ಗಣನೀಯವಾಗಿ ಕಡಿಮೆಯಾದ ಪ್ರಕರಣಗಳ ಮೇಲೆ ಈ ತೆರಿಗೆ ಅಧಿಕಾರಿಗಳು ಹದ್ದಿನ ಕಣ್ಣಿಟ್ಟಿರುತ್ತಾರೆ.
ಇದನ್ನೂ ಓದಿ- 8th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್! ಸಿಗುತ್ತೆ ಕನಿಷ್ಠ 5 ಪ್ರಮೋಷನ್..!
ತೆರಿಗೆ ಇಲಾಖೆಯು ತೆರಿಗೆದಾರರು ಸಲ್ಲಿಸುವ ದೂರುಗಳ ಬಗ್ಗೆಯೂ ಸಹ ಗಮನ ಹರಿಸುವಂತೆ ಅಧಿಕಾರಿಗಳಿಗೆ ಹೇಳಿದೆ . ಟಿಡಿಎಸ್ ಪಾವತಿಗಳಲ್ಲಿನ ಮಾದರಿಗಳು ಮತ್ತು ಅಕ್ರಮಗಳನ್ನು ಗುರುತಿಸಲು ಡೇಟಾ ವಿಶ್ಲೇಷಣೆಯನ್ನು ಬಳಸುವುದರೊಂದಿಗೆ ಸಂಬಂದಪಟ್ಟ ದಾಖಲೆಗಳ ಪರಿಶೀಲಿಸುವುದರ ಮೂಲಕ ಈ ಸಮಸ್ಯೆಗೆ ಪರಿಹಾರ ನೀಡಲಿದೆ. ಇಲಾಖೆಯ ಹಿಂದಿನ ಅಭಿಯಾನಗಳಂತೆ ಇದರಲ್ಲಿ ಯಾರಿಗೂ ಕಿರುಕುಳ ನೀಡದಂತೆ ಜಾಗರೂಕತೆಯಿಂದ ಕಾರ್ಯನಿರ್ವಹಿಸಲಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ. ಈ ವರ್ಷದ ಬಜೆಟ್‌ನಲ್ಲಿ, ಕೇಂದ್ರ ಸರ್ಕಾರವು ಟಿಡಿಎಸ್ ಮತ್ತು ಟಿಸಿಎಸ್ ದರಗಳ ತರ್ಕಬದ್ಧಗೊಳಿಸುವಿಕೆಯನ್ನು ಘೋಷಿಸಿದೆ. ಅಷ್ಟೇಅಲ್ಲದೇ ದರಗಳ ಸಂಖ್ಯೆ ಮತ್ತು ಟಿಡಿಎಸ್ ಕಡಿತದ ಮಿತಿಯನ್ನು ಕಡಿಮೆ ಮಾಡಲಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.