8th Pay Commission: ಹೊಸ ವರ್ಷದಲ್ಲಿ 8ನೇ ವೇತನ ಆಯೋಗಕ್ಕೆ ಅಸ್ತು ಎಂದಿರುವ ಮೋದಿ ಸರ್ಕಾರ ಇದೀಗ ಹೊಸ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ರಾಷ್ಟ್ರೀಯ ಜಂಟಿ ಸಮಾಲೋಚನಾ ಯಂತ್ರಗಳ ಮಂಡಳಿಯಿಂದ (NC-JCM) ಸಲಹೆಗಳನ್ನು ಕೋರಿದೆ. ಇದಕ್ಕೆ ಪ್ರತಿಕ್ರಿಯಿಸಿರುವ NC-JCM 8ನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರಿಗೆ ಸೇವಾವಧಿಯಲ್ಲಿ ಕನಿಷ್ಠ 5 ಬಡ್ತಿಗಳನ್ನು ಪರಿಗಣಿಸಬೇಕು ಎಂದು ಶಿಫಾರಸು ಮಾಡಿದೆ.
8ನೇ ವೇತನ ಆಯೋಗಕ್ಕೆ NC-JCM ಶಿಫಾರಸ್ಸುಗಳು:
8ನೇ ವೇತನ ಆಯೋಗವು ಮಾರ್ಪಡಿಸಿದ ಖಚಿತ ವೃತ್ತಿ ಪ್ರಗತಿ (MACP) ಯೋಜನೆಯಲ್ಲಿ ಅಸ್ತಿತ್ವದಲ್ಲಿರುವ ಕೆಲವು ನಿಯಮಗಳನ್ನು ತೆಗೆದುಹಾಕುವ ಅವಶ್ಯಕತೆ ಇದೆ. ಇದರೊಂದಿಗೆ ಉದ್ಯೋಗಿಗಳಿಗೆ ಅವರ ಸೇವಾವಧಿಯಲ್ಲಿ ಕನಿಷ್ಠ 5 ಬಡ್ತಿಗಳನ್ನಾದರೂ ನೀಡುವುದನ್ನು ಪರಿಗಣಿಸಬೇಕು ಎಂದು ತಿಳಿಸಿದೆ.
ಇದನ್ನೂ ಓದಿ- IRCTC Confirm Ticket: ಟ್ರೈನ್ ಹೊರಡುವ ಕೆಲ ನಿಮಿಷ ಮೊದಲೂ ಸಿಗುತ್ತೆ ಕನ್ಫರ್ಮ್ ಟಿಕೆಟ್, ಜಸ್ಟ್ ಹೀಗೆ ಟಿಕೆಟ್ ಬುಕ್ ಮಾಡಿ..!
ವಾಸ್ತವವಾಗಿ, ಮಾರ್ಪಡಿಸಿದ ಖಚಿತ ವೃತ್ತಿ ಪ್ರಗತಿ (MACP) ಯೋಜನೆಯಡಿ ಕೇಂದ್ರ ಸರ್ಕಾರಿ ನೌಕರರು ತಮ್ಮ ಮೂರು ದಶಕಗಳ ಸೇವಾವಧಿಯಲ್ಲಿ ಕನಿಷ್ಠ ಮೂರು ಬಡ್ತಿಗಳನ್ನು ಮಾತ್ರ ಪಡೆಯುತ್ತಾರೆ. MACP ಉದ್ಯೋಗಿಗಳಿಗೆ 10, 20 ಮತ್ತು 30 ವರ್ಷಗಳ ಸೇವೆಯಲ್ಲಿ ಮೂರು ಬಡ್ತಿಗಳನ್ನು ಖಾತರಿಪಡಿಸುತ್ತದೆ. ಇದರ ಸಂಖ್ಯೆ ಕನಿಷ್ಠ 5 ಆಗಿರಬೇಕು ಎಂದು NC-JCM ಶಿಫಾರಸ್ಸು ಮಾಡಿದ್ದ್.ಎ
8ನೇ ವೇತನ ಆಯೋಗ: ವೇತನ ಹೆಚ್ಚಳ:
8ನೇ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳದಲ್ಲಿ 1.92-2.86 ರ ನಡುವಿನ ಫಿಟ್‌ಮೆಂಟ್ ಅಂಶವನ್ನು ಪರಿಗಣಿಸಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ- New Tax Regime Deductions: ತೆರಿಗೆದಾರರಿಗೆ ಹೊಸ ತೆರಿಗೆ ವ್ಯವಸ್ಥೆಯಲ್ಲೂ ಸಿಗುತ್ತೆ 3 ರೀತಿಯ ಕಡಿತದ ಪ್ರಯೋಜನ..!
ನಿವೃತ್ತಿ ಸೌಲಭ್ಯ:
8ನೇ ವೇತನ ಆಯೋಗದಲ್ಲಿ ಜನವರಿ 01, 2004ರ ನಂಟ್ರ ನೇಮಕಗೊಂಡ ಉದ್ಯೋಗಿಗಳಿಗೆ ಪಿಂಚಣಿ, ಗ್ರಾಚ್ಯುಟಿ ಮತ್ತು ಕುಟುಂಬ ಪಿಂಚಣಿಯಂತಹ ಸೌಲಭ್ಯಗಳನ್ನು ಪರಿಷ್ಕರಿಸುವುದರ ಜೊತೆಗೆ ಅವುಗಳನ್ನು ಮರುಸ್ಥಾಪಿಸುವ ಬಗ್ಗೆ ಶಿಫಾರಸ್ಸು ಮಾಡುವ ನಿರೀಕ್ಷೆಯಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.